ಅಂತರ್ಜಾತಿ ಮದುವೆ: ಪ್ರೀತಿ vs ಜಾತಿ – ಸಮಾಜದ ನಿಜವಾದ ಸಮಸ್ಯೆ ಏನು?
ಭಾರತೀಯ ಸಮಾಜದಲ್ಲಿ ಒಂದು ವಿಚಿತ್ರ ಸಂಗತಿ ಕಾಣಿಸುತ್ತದೆ. ನಾವು ದೇವಾಲಯಗಳಲ್ಲಿ, ಧರ್ಮಗ್ರಂಥಗಳಲ್ಲಿ, ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತೇವೆ. ಆದರೆ ಮದುವೆಯ ವಿಷಯ ಬಂದಾಗ ಮಾತ್ರ “ನಮ್ಮ ಜಾತಿ”, “ನಮ್ಮ ಕುಲ”, “ನಮ್ಮ ಸಂಪ್ರದಾಯ” ಎಂಬ ಗೋಡೆಗಳು ಏಕಾಏಕಿ ಎದ್ದು ನಿಂತುಕೊಳ್ಳುತ್ತವೆ. ಹಾಗಾದರೆ ಪ್ರಶ್ನೆ –ಅಂತರ್ಜಾತಿ ಮದುವೆಗಳಿಗೇಕಿಷ್ಟು ವಿರೋಧ? ೧. ಜಾತಿ ಅಂದರೆ ಕೇವಲ ಪರಂಪರೆ ಅಲ್ಲ – ಒಂದು ಸಾಮಾಜಿಕ ವ್ಯವಸ್ಥೆ ಜಾತಿ ವ್ಯವಸ್ಥೆ ಶತಮಾನಗಳಿಂದ ಕೇವಲ ಗುರುತು ಮಾತ್ರವಲ್ಲ, ಅದು ಒಂದು ಸಾಮಾಜಿಕ ನಿಯಂತ್ರಣ … Read more
ನಾನು ಹೆಣ್ಣಾಗಿದ್ದು ನಿನಗೆಷ್ಟು ಲಾಭ? ಎಷ್ಟು ನಷ್ಟ?
ಒಂದು ಪ್ರಶ್ನೆ ಕೆಲವೊಮ್ಮೆ ಮನಸ್ಸಿನಲ್ಲಿ ಎದ್ದುಕೊಳ್ಳುತ್ತದೆ. ನಾನು ಹೆಣ್ಣಾಗಿದ್ದು ನಿನಗೆಷ್ಟು ಲಾಭ?ಎಷ್ಟು ನಷ್ಟ? ಈ ಪ್ರಶ್ನೆ ಕೋಪದಿಂದ ಕೇಳುವುದಲ್ಲ. ಇದುಜೀವನವನ್ನು ಗಮನಿಸಿ ಕೇಳುವ ಪ್ರಶ್ನೆ. ನಾನು ಹೆಣ್ಣಾಗಿದ್ದರಿಂದ ನೀನು ಪರಿತಪಿಸಬೇಕಿಲ್ಲ ನಾನು ಹೆಣ್ಣಾಗಿದ್ದರಿಂದನೀನು ಪರಿತಪಿಸಬೇಕಿಲ್ಲ. ನಾನು ಓದಿ, ಕೆಲಸ ಮಾಡಿನಿನ್ನನ್ನು ಸಾಕಬಹುದು. ಅಥವಾಯಾರೋ ದುಡ್ಡಿದ್ದವರನ್ನು ಮದುವೆಯಾಗಿನಿನ್ನ ಕೆಲಸಗಳಿಗೆ, ನಿನ್ನ ಬದುಕಿಗೆಆಧಾರವಾಗಬಹುದು. ನಾನು ಹೆಣ್ಣಾಗಿದ್ದರಿಂದನಿನ್ನ ಹೊರೆ ಕಡಿಮೆಯಾಗಬಹುದು. ನಾನು ಹೆಣ್ಣಾಗಿದ್ದರಿಂದ ಮನೆಯ ಕೆಲಸ ನಿಲ್ಲುವುದಿಲ್ಲ ನಾನು ಹೆಣ್ಣಾಗಿದ್ದುದರಿಂದನೀನು ನಿನ್ನ ಮಕ್ಕಳನ್ನು ಸಾಕಲುಬೇರೆ ಜನ ಬೇಕಿಲ್ಲ. ನಾನು ಅಕ್ಕನಾಗಿನೀನು ಹುಟ್ಟಿಸಿದ … Read more
ಹೆಣ್ಣಿನ ಮೌನವನ್ನು ಸಮಾಜ ಯಾಕೆ ಇಷ್ಟಪಡುತ್ತದೆ?
ಹೆಣ್ಣು ಬದಲಾದರೆ ಸಮಾಜಕ್ಕೆ ಏನು ಭಯ? ಸಮಾಜ ಹೆಣ್ಣಿನಿಂದ ಬಹಳಷ್ಟು ನಿರೀಕ್ಷಿಸುತ್ತದೆ. ಅವಳು ಸಹಿಸಬೇಕು.ಅವಳು ಹೊಂದಿಕೊಳ್ಳಬೇಕು.ಅವಳು ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕು. ಆದರೆಅವಳು ಪ್ರಶ್ನೆ ಕೇಳಬಾರದು. ಯಾಕೆಂದರೆಸಮಾಜಕ್ಕೆ ಇಷ್ಟವಾದ ಹೆಣ್ಣುಒಂದೇ ರೀತಿಯವಳು — ಮೌನವಾಗಿರುವ ಹೆಣ್ಣು. ಮೌನ — ಹೆಣ್ಣಿಗೆ ಕಲಿಸುವ ಮೊದಲ ಸಂಸ್ಕಾರ ಚಿಕ್ಕ ವಯಸ್ಸಿನಿಂದಲೇಹೆಣ್ಣಿಗೆ ನಿಧಾನವಾಗಿ ಕಲಿಸಲಾಗುತ್ತದೆ. ಹೆಚ್ಚು ಮಾತಾಡಬೇಡ.ಹೆಚ್ಚು ವಿರೋಧಿಸಬೇಡ.ಹೊಂದಿಕೊಂಡು ಬಾಳು. ಹೀಗೆಅವಳ ಧ್ವನಿ ನಿಧಾನವಾಗಿ ಕಡಿಮೆಯಾಗುತ್ತದೆ. ಒಂದು ದಿನಅವಳು ತನ್ನ ನೋವನ್ನುತಾನೇ ಮೌನಗೊಳಿಸಿಕೊಳ್ಳುವ ಮಟ್ಟಕ್ಕೆ ಬರುತ್ತಾಳೆ. ಸಮಾಜ ಅದನ್ನು ನೋಡಿ ಹೇಳುತ್ತದೆ — “ಎಷ್ಟು … Read more
ಅವರು ಸುಂದರತೆಯನ್ನು ಹೇಗೆ ನಿರ್ಧರಿಸುತ್ತಾರೆ?
ಸೌಂದರ್ಯದ ರಾಜಕೀಯ ಮತ್ತು ವ್ಯವಸ್ಥೆಯ ಮೌನ ಭ್ರಷ್ಟತೆ ಕೆಲಸದ ಸ್ಥಳದಲ್ಲಿ – ಅವಕಾಶದ ಮೊದಲ ಬಾಗಿಲು ಒಬ್ಬ ಹುಡುಗಿ ಕೆಲಸದ ಸಂದರ್ಶನಕ್ಕೆ ಹೋಗುತ್ತಾಳೆ. ಅವಳ ವಿದ್ಯಾರ್ಹತೆ, ಅನುಭವ, ಕೌಶಲ್ಯ ಎಲ್ಲವೂ ದಾಖಲಾಗಿರಬಹುದು.ಆದರೆ ಸಂದರ್ಶನದ ಕೊಠಡಿಯಲ್ಲಿ ಮೊದಲ ಮಾನದಂಡ ಏನು? ಅವಳು ಸುಂದರವಾಗಿದ್ದಾಳೆಯೇ?ಅಂದವಾಗಿ ಅಲಂಕರಿಸಿಕೊಂಡಿದ್ದಾಳೆಯೇ?ಕ್ಯಾಮರಾ ಕಣ್ಣಲ್ಲಿ ಚೆಂದ ಕಾಣುತ್ತಾಳೆಯೆ? ಕೆಲವೊಮ್ಮೆ ಆ ಮೊದಲ ನೋಟವೇ ಮುಂದಿನ ಪ್ರಶ್ನೆಗಳ ಸ್ವರೂಪವನ್ನು ನಿರ್ಧರಿಸುತ್ತದೆ.ಅವಳ ಸಾಮರ್ಥ್ಯದ ಬಗ್ಗೆ ಕೇಳಬೇಕಾದಲ್ಲಿ, ಅವಳ “ ನೋಟದ ಯೋಗ್ಯತೆ” ಬಗ್ಗೆ ಮಾತು ಶುರುವಾಗುತ್ತದೆ. ಇದು ನೇರ ಭೇದಭಾವ … Read more