ಒಂದು ಧ್ವನಿ, ಎರಡು ನೋಟ: ಜಗತ್ತಿನ ಅವಲೋಕನ ಮತ್ತು ಬದುಕಿನ ಮಾರ್ಗದರ್ಶನ
ಪ್ರಿಯ ಓದುಗರೆ, ನಿಮಗೆ ಆತ್ಮೀಯ ಸ್ವಾಗತ.
ನಾನು ಶೀಲಾ ಭಟ್.
ಕಳೆದ 22 ವರ್ಷಗಳಿಂದ ನನ್ನ ಬದುಕು ಒಂದು ಮುಖ್ಯ ಉದ್ದೇಶದ ಸುತ್ತ ಸಾಗುತ್ತಿದೆ – ಆಳವಾದ ಮತ್ತು ನಿರಂತರವಾದ ಅವಲೋಕನ. ಒಬ್ಬ ಹಿರಿಯ ಪತ್ರಕರ್ತೆಯಾಗಿ, ನಾನು ಮನುಷ್ಯನ ಜೀವನ, ಮನಸ್ಸು, ಸಮಾಜ, ಹಣಕಾಸು, ರಾಜಕೀಯ, ಸಾಮಾಜಿಕ ಬದಲಾವಣೆಗಳು ಮತ್ತು ಸಿನಿಮಾ ರಂಗದ ಸೂಕ್ಷ್ಮಗಳನ್ನು ಹತ್ತಿರದಿಂದ ನೋಡಿದ್ದೇನೆ. ನನ್ನ ‘ಆವಲೋಕನ’ ಅಂಕಣವು ಕೇವಲ ಸುದ್ಧಿಯನ್ನು ನೀಡುವುದಿಲ್ಲ; ಬದಲಿಗೆ ಸಮಾಜದ ವಿದ್ಯಮಾನಗಳನ್ನು ವಿಶ್ಲೇಷಿಸುವ ವೈಚಾರಿಕ ಚಿಂತನೆಗಳನ್ನು ನಿಮ್ಮ ಮುಂದೆ ಇಡುತ್ತದೆ.
ಜಗತ್ತನ್ನು ಇಷ್ಟು ಹತ್ತಿರದಿಂದ ಗಮನಿಸಿದಾಗ ನನಗೆ ಒಂದು ಸತ್ಯ ಅರ್ಥವಾಯಿತು – ಸಮಾಜದ ಬದಲಾವಣೆ ಮೊದಲು ನಮ್ಮ ಮನೆಯಿಂದ, ಅಂದರೆ ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದಿಂದ ಆರಂಭವಾಗಬೇಕು. ಈ ಆಲೋಚನೆಯೇ ನನ್ನನ್ನು ಒಬ್ಬ ಲೈಫ್ ಕೋಚ್ (ಜೀವನ ಮಾರ್ಗದರ್ಶಿ) ಆಗಲು ಪ್ರೇರೇಪಿಸಿತು. ನನ್ನ ‘ಜೀವನ ಪ್ರಣತಿ’ ವಿಭಾಗದ ಮೂಲಕ, ನಾನು ಇಂದಿನ ಹದಿಹರೆಯದ ಮಕ್ಕಳು ಮತ್ತು ಅವರ ಪೋಷಕರಿಗಿರುವ ಮಾನಸಿಕ ಒತ್ತಡಗಳನ್ನು ನಿವಾರಿಸಲು, ಅವರ ನಡುವೆ ಸುಲಭ ಸಂವಹನ ಮೂಡಿಸಲು ಗಂಭೀರವಾಗಿ ಶ್ರಮಿಸುತ್ತಿದ್ದೇನೆ. ಒಬ್ಬ ಉತ್ತಮ ಪೋಷಕ, ಒಬ್ಬ ಉತ್ತಮ ವ್ಯಕ್ತಿಯೂ ಹೌದು. ಆ ಮೂಲಕ ಸಮಾಜವನ್ನು ಒಳಗಿನಿಂದ ಕಟ್ಟಲು ನನ್ನ ಅಳಿಲು ಪ್ರಯತ್ನ.
ಪತ್ರಿಕೋದ್ಯಮ ಮತ್ತು ಜೀವನ ಮಾರ್ಗದರ್ಶನ – ಇವೆರಡೂ ನನಗೆ ಬೇರೆ ಬೇರೆಯಲ್ಲ. ರಾಜಕೀಯದ ಜಟಿಲತೆಯನ್ನು ವಿಶ್ಲೇಷಿಸುವುದಾಗಲಿ ಅಥವಾ ಪೋಷಕರ ಆತಂಕವನ್ನು ದೂರ ಮಾಡುವುದಾಗಲಿ, ನನ್ನ ಮೂಲ ಮಂತ್ರ ಒಂದೇ: ಬದುಕಿನ ಘಟನಾವಳಿಗಳ ಆಳವಾದ ಆವಲೋಕನ.
ನನ್ನ ಲೇಖನಗಳನ್ನು ಇಲ್ಲಿ ಓದಿ:
- ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಶ್ಲೇಷಣೆಗಳಿಗಾಗಿ:
ಅವಲೋಕನಕ್ಲಿಕ್ ಮಾಡಿ.- ಪೋಷಣೆ ಮತ್ತು ಹದಿಹರೆಯದ ಮಕ್ಕಳ ಮನಃಶಾಸ್ತ್ರದ ಮಾರ್ಗದರ್ಶನಕ್ಕಾಗಿ:
ಜೀವನ ಪ್ರಣತಿಕ್ಲಿಕ್ ಮಾಡಿ.