ಕೌತುಕ: ಮಗು ಮತ್ತು ಮಂಗಟ್ಟೆ ಹಕ್ಕಿಯ ಮಧ್ಯೆ ನಾವು ಎಲ್ಲಿದ್ದೇವೆ?

ಪರಿಸರದ ಕುರಿತು ನಾವು ಮಾತನಾಡುವಾಗ ಸಾಮಾನ್ಯವಾಗಿ ಅಂಕಿಅಂಶಗಳು, ನಾಶವಾಗುತ್ತಿರುವ ಅರಣ್ಯಗಳು, ಹವಾಮಾನ ಬದಲಾವಣೆಗಳ ಬಗ್ಗೆ ಚರ್ಚಿಸುತ್ತೇವೆ. ಆದರೆ ಒಂದು ಮಗು ಮತ್ತು ಒಂದು ಹಕ್ಕಿಯ ನಡುವೆ ಮೂಡುವ ಸಂಬಂಧದ ಮೂಲಕ ಪರಿಸರದ ಆತ್ಮವನ್ನು ತೋರಿಸಬಹುದೇ? ಯುವ ನಿರ್ದೇಶಕ ಪ್ರಶಾಂತ್ ಸಾಗರ್ ಅವರ ‘ಕೌತುಕ’ ಅದನ್ನೇ ಮಾಡುತ್ತದೆ. ದಾಂಡೇಲಿಯ ಕಾಡು ಇಲ್ಲಿ ಕೇವಲ ಹಿನ್ನೆಲೆ ಅಲ್ಲ — ಅದು ಜೀವಂತ ಸಾನ್ನಿಧ್ಯ. ಕುಣಬಿ ಜನಾಂಗದ ಬದುಕು, ಅವರ ಪರಂಪರೆಯ ಬೇಟೆ ಸಂಸ್ಕೃತಿ, ಸರಕಾರಿ ಶಾಲೆಯ ಪ್ರಾದೇಶಿಕ ಶಿಕ್ಷಣ ವಾತಾವರಣ … Read more

ಅಂಡರ್ ದ ವೊಲ್ಕ್ಯಾನೊ: ಯುದ್ಧ ಹೊರಗಲ್ಲ… ಒಳಗೇ ಸ್ಫೋಟಗೊಳ್ಳುತ್ತದೆ!

Under the Volcano ಪೊಲಾಂಡ್‌ನ ನಿರ್ದೇಶಕ ಡೆಮಿಯನ್ ಕೊಕುರ್ ಅವರ ಈ ಚಿತ್ರ, ದೃಶ್ಯಕಾವ್ಯದ ಮೂಲಕ ಮನುಷ್ಯನ ಅಂತರಂಗದ ಅಗಾಧತೆಯನ್ನು ಅನಾವರಣಗೊಳಿಸುತ್ತದೆ. ಮೂಲತಃ ಸಿನಿಮಾಟೋಗ್ರಾಫರ್ ಆಗಿರುವ ಕೊಕುರ್, ಸಮುದ್ರವನ್ನು ಕೇವಲ ದೃಶ್ಯವಾಗಿ ಅಲ್ಲ, ಮನಸ್ಸಿನ ರೂಪಕವಾಗಿ ಬಳಸುತ್ತಾರೆ. ಅದಕ್ಕೇ ಇಡೀ ಸಿನಿಮಾ ಒಂದು ಮೌನ ಕಾವ್ಯವಾಗಿ ಹರಿಯುತ್ತದೆ. ಉಕ್ರೇನ್‌ನ ಕೊವಲೆಂಕೊ ಕುಟುಂಬ ಸ್ಪೇನಿನ ಟೆನೆರಿಫೆ ದ್ವೀಪದಲ್ಲಿ ಪ್ರವಾಸದಲ್ಲಿದೆ. ಊರಿಗೆ ಮರಳುವ ಕ್ಷಣ ಹತ್ತಿರವಾಗಿರುವಾಗಲೇ ರಷ್ಯಾ–ಉಕ್ರೇನ್ ಯುದ್ಧ ಘೋಷಣೆಯಾಗುತ್ತದೆ. ವಿಮಾನಗಳು ಸ್ಥಗಿತಗೊಳ್ಳುತ್ತವೆ. ಹಿಂತಿರುಗಲಾರರು. ಇದ್ದಲ್ಲಿಯೂ ಇರಲಾರರು. ಅನಿಶ್ಚಿತತೆ ಅವರ … Read more

ಅತಿಯಾದ ಸಾಮಿಪ್ಯದಲ್ಲಿ ನಾವು ಕಳೆದುಕೊಳ್ಳುವುದೇನು?

ಸಂಬಂಧಗಳು ನಮ್ಮ ಜೀವನದ ಪ್ರಮುಖ ಭಾಗ. ಕುಟುಂಬ, ಸ್ನೇಹ, ದಾಂಪತ್ಯ, ಕೆಲಸದ ಸಂಬಂಧಗಳು — ಎಲ್ಲವೂ ನಮ್ಮ ಭಾವನಾತ್ಮಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಸಂಬಂಧಗಳು ಆರೋಗ್ಯಕರವಾಗಿರಲು ಕೇವಲ ಪ್ರೀತಿ ಸಾಕಾಗುವುದಿಲ್ಲ. ಗಡಿಗಳು (Boundaries) ಕೂಡ ಅಗತ್ಯ. ಗಡಿಗಳು ಎಂದರೆ ದೂರ ಇಡುವ ಗೋಡೆಗಳು ಅಲ್ಲ. ಅವು ನಮ್ಮನ್ನು ಕಾಪಾಡುವ ರೇಖೆಗಳು. ಗಡಿ ಎಂದರೆ ಏನು? ಗಡಿ ಎಂದರೆ ನಮಗೆ ಯಾವ ವರ್ತನೆ ಒಪ್ಪಿಗೆಯಾಗಿದೆ, ಯಾವುದು ಅಲ್ಲ ಎಂಬುದನ್ನು ಸ್ಪಷ್ಟಪಡಿಸುವುದು. ಉದಾಹರಣೆಗೆ ಒಬ್ಬ ಸ್ನೇಹಿತ ಪದೇಪದೇ ರಾತ್ರಿ … Read more

ಮೈ ಫಾದರ್ಸ್ ಶ್ಯಾಡೋವ್: ತಂದೆಯ ನೆರಳನ್ನು ತಪ್ಪಿಸಿಕೊಳ್ಳಲು ಸಾಧ್ಯವೇ?

ಯುಕೆಯ ಅಕಿನೊವಾ ಡೇವಿಸ್ (ಜ್ಯೂ) ನಿರ್ದೇಶನದ ಮೈ ಫಾದರ್ಸ್ ಶ್ಯಾಡೋವ್ ,ನೈಜೀರಿಯಾದಲ್ಲಿ ನಡೆಯುವ ವಾಸ್ತವಾಧಾರಿತ ಆಂಗ್ಲ ಸಿನಿಮಾ. ಮಿಲಿಟರಿ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಉದಯಿಸಬೇಕು ಎಂಬ ಕನಸಿನ ಹೊತ್ತಿನಲ್ಲಿ ಬದುಕುತ್ತಿರುವ ಹೋರಾಟಗಾರ ಪೋಲಾ ಇದರ ಕೇಂದ್ರ ಪಾತ್ರ. ತನ್ನ ಹದಿಹರೆಯದಲ್ಲೇ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ, ಇಬ್ಬರು ಮಕ್ಕಳ ತಂದೆಯಾಗಿರುವ ಪೋಲಾ ಹೊರನೋಟಕ್ಕೆ ಯಶಸ್ವಿ ಕುಟುಂಬಸ್ಥ. ಆದರೆ ಒಳಗೆ ಅವನು ಬದುಕುತ್ತಿರುವುದು ತೀವ್ರ ಸಂಘರ್ಷಗಳ ಮಧ್ಯೆ. ೧೧ ವರ್ಷದ ಹಿರಿಯ ಮಗ ತನ್ನದೇ ಲೋಕದಲ್ಲಿ ಮುಳುಗಿರುವವನು. ಅವನ ಮುಖದಲ್ಲಿ … Read more

error: Content is protected !!