ಒಂದು ದಿನ ನಾನು ನನ್ನನ್ನೇ ಕೇಳಿಕೊಂಡೆ.
ನಾನಿನ್ನೂ ಬಡವನಾಗಿದ್ದೀನಿ… ಯಾಕೆ?
ಈ ಪ್ರಶ್ನೆಗೆ ಉತ್ತರ ಹುಡುಕಲು
ನಾನು ಮೊದಲಿಗೆ ಜಗತ್ತನ್ನು ನೋಡಿದೆ.
ಪರಿಸ್ಥಿತಿಯನ್ನು ನೋಡಿದೆ.
ಸಮಾಜವನ್ನು ನೋಡಿದೆ.
ಅವಕಾಶಗಳನ್ನು ನೋಡಿದೆ.
ಆದರೆ ನಿಧಾನವಾಗಿ ನನಗೆ ಒಂದು ಅನುಮಾನ ಬಂತು.
ನಿಜವಾಗಿಯೂ ಕಾರಣ ಹೊರಗಿದೆಯೇ?
ಅಥವಾ ನನ್ನೊಳಗಿದೆಯೇ?
ಅಲ್ಲಿಂದ ನನ್ನ ಅವಲೋಕನ ಆರಂಭವಾಯಿತು.
ಹಣವನ್ನು ನಾನು ಗೌರವಿಸಿರಲಿಲ್ಲ
ಹಣ ಬಂದಾಗ
ಅದನ್ನು ಉಳಿಸುವುದಕ್ಕಿಂತ
ಅದನ್ನು ಖರ್ಚು ಮಾಡುವುದರಲ್ಲಿ
ಹೆಚ್ಚು ಆಸಕ್ತಿ ಇತ್ತು.
ಒಳ್ಳೆಯ ಬಟ್ಟೆ ಬೇಕು.
ಒಳ್ಳೆಯ ಫೋನ್ ಬೇಕು.
ಇತರರ ಮುಂದೆ ನಾನು ಚೆನ್ನಾಗಿ ಕಾಣಬೇಕು.
ಆದರೆ ಒಂದು ವಿಷಯವನ್ನು ನಾನು ಯೋಚಿಸಲಿಲ್ಲ.
ಹಣವನ್ನು ಬೆಳೆಸುವ ಕಲೆಯನ್ನು ನಾನು ಕಲಿತಿರಲಿಲ್ಲ.
ಹಣವನ್ನು ಗಳಿಸುವುದಕ್ಕಿಂತ
ಅದನ್ನು ಉಳಿಸುವುದೂ ಒಂದು ಕಲೆ.
ಅದನ್ನು ನಾನು ತಡವಾಗಿ ಅರಿತುಕೊಂಡೆ.
ತಾತ್ಕಾಲಿಕ ಸಂತೋಷದ ಹಿಂದೆ ಓಡುತ್ತಿದ್ದೆ
ಬಡತನ ಅಂದರೆ
ಹಣದ ಕೊರತೆ ಮಾತ್ರವಲ್ಲ.
ಕೆಲವೊಮ್ಮೆ ಅದು
ನಾಳೆಯ ಬಗ್ಗೆ ಯೋಚಿಸದ ಮನಸ್ಸು.
ಇಂದು ಖುಷಿ ಬೇಕು.
ಇಂದು ಸುಖ ಬೇಕು.
ಆದರೆ ನಾಳೆಯ ಭದ್ರತೆಗಾಗಿ
ನಾನು ನನನ್ನು ತಯಾರಿಸಿಕೊಳ್ಳಲಿಲ್ಲ.
ನಿಧಾನವಾಗಿ
ಇದು ನನ್ನ ಬದುಕಿನ ಒಂದು ಅಭ್ಯಾಸವಾಗಿ ಬಿಟ್ಟಿತು.
ನನ್ನ ಸಾಮರ್ಥ್ಯವನ್ನು ಬೆಳೆಸಲಿಲ್ಲ
ಒಂದು ಸಮಯದಲ್ಲಿ ನನಗೆ ಒಂದು ಸತ್ಯ ತಿಳಿಯಿತು.
ಜಗತ್ತಿನಲ್ಲಿ ಹಣ
ಸಮಸ್ಯೆಗಳನ್ನು ಪರಿಹರಿಸುವವರಿಗೆ ಬರುತ್ತದೆ.
ಜನರಿಗೆ ಉಪಯೋಗವಾಗುವ
ಕೌಶಲ್ಯಗಳು ಇದ್ದರೆ
ಅವಕಾಶಗಳು ಕೂಡ ಬರುತ್ತವೆ.
ಆದರೆ ನಾನು
ನನ್ನ ಸಾಮರ್ಥ್ಯಗಳನ್ನು ಬೆಳೆಸುವುದಕ್ಕಿಂತ
ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೆ.
ಅವಕಾಶ ಬಂತು.
ಆದರೆ ನಾನು ಸಿದ್ಧವಾಗಿರಲಿಲ್ಲ.
ಪರಿಸ್ಥಿತಿಯನ್ನು ಮಾತ್ರ ಕಾರಣ ಮಾಡುತ್ತಿದ್ದೆ
ಇದು ಒಪ್ಪಿಕೊಳ್ಳಲು ಸ್ವಲ್ಪ ಕಷ್ಟವಾದ ಸತ್ಯ.
ನಾನು ಹೇಳಿಕೊಳ್ಳುತ್ತಿದ್ದೆ —
ನನ್ನ ಪರಿಸ್ಥಿತಿ ಕಾರಣ.
ನನ್ನ ಕುಟುಂಬ ಕಾರಣ.
ನನ್ನ ದೇಶ ಕಾರಣ.
ಆದರೆ ಒಂದು ದಿನ ನಾನು ನನ್ನನ್ನು ಕೇಳಿಕೊಂಡೆ.
ನಿಜವಾಗಿಯೂ ನಾನು ನನ್ನ ಸಂಪೂರ್ಣ ಶಕ್ತಿಯಿಂದ ಪ್ರಯತ್ನಿಸಿದ್ದೇ?
ಆ ಪ್ರಶ್ನೆಗೆ ಉತ್ತರ ನೀಡಲು
ನನ್ನೊಳಗೆ ಸ್ವಲ್ಪ ನಿಶ್ಶಬ್ದ ಮೂಡಿತು.
ಆ ನಿಶ್ಶಬ್ದದಲ್ಲಿ
ಕೆಲವು ಸತ್ಯಗಳು ಕಾಣಿಸಿಕೊಂಡವು.
ಹಣದ ಬಗ್ಗೆ ತಪ್ಪು ನಂಬಿಕೆಗಳು
ಬಾಲ್ಯದಿಂದ ನಾವು ಹಲವಾರು ಮಾತುಗಳನ್ನು ಕೇಳುತ್ತೇವೆ.
ಹಣ ಇದ್ದವರು ಕೆಟ್ಟವರು.
ಹಣ ಬಂದರೆ ಮನಸ್ಸು ಕೆಡುತ್ತದೆ.
ಇಂತಹ ಮಾತುಗಳು
ನಮ್ಮೊಳಗೆ ಒಂದು ಅಜ್ಞಾತ ಭಯವನ್ನು ಸೃಷ್ಟಿಸುತ್ತವೆ.
ಅದರಿಂದ
ಹಣದಿಂದ ದೂರವಾಗಿರುವ ಮನಸ್ಸನ್ನು
ನಾವು ತಿಳಿಯದೆ ಬೆಳೆಸಿಕೊಳ್ಳುತ್ತೇವೆ.
ಒಂದು ಅರಿವು
ಆ ದಿನ ನನಗೆ ಒಂದು ಮುಖ್ಯ ಸತ್ಯ ತಿಳಿಯಿತು.
ನಾನು ಬಡವನಾಗಿದ್ದೇನೆ ಅಂದರೆ
ಜಗತ್ತು ನನ್ನನ್ನು ಬಡವನನ್ನಾಗಿ ಮಾಡಿಲ್ಲ.
ನನ್ನ ಕೆಲವು ಅರಿವಿಲ್ಲದ ನಿರ್ಧಾರಗಳು
ನನ್ನನ್ನು ಇಲ್ಲಿ ತಂದಿವೆ.
ಆದರೆ ಈ ಅರಿವಿನಲ್ಲಿ
ಒಂದು ಆಶೆಯೂ ಇದೆ.
ಯಾಕಂದ್ರೆ
ನನ್ನ ನಿರ್ಧಾರಗಳು ನನ್ನನ್ನು ಇಲ್ಲಿ ತಂದಿದ್ದರೆ,
ಹೊಸ ನಿರ್ಧಾರಗಳು
ನನ್ನನ್ನು ಬೇರೆಡೆಗೂ ತೆಗೆದುಕೊಂಡು ಹೋಗಬಹುದು.
ಅವಲೋಕನ
ಬಡತನದಿಂದ ಹೊರಬರುವುದು
ಕೆಲವೊಮ್ಮೆ ಹಣದಿಂದ ಆರಂಭವಾಗುವುದಿಲ್ಲ.
ಅರಿವಿನಿಂದ ಆರಂಭವಾಗುತ್ತದೆ.
ಒಮ್ಮೆ ನಾವು
ನಮ್ಮ ಜೀವನವನ್ನು ನಿಜವಾಗಿ ನೋಡಲು ಆರಂಭಿಸಿದರೆ,
ಅಲ್ಲಿಂದ
ಹೊಸ ದಾರಿಗಳು ನಿಧಾನವಾಗಿ ಕಾಣಲು ಶುರುವಾಗುತ್ತವೆ.
ಅದೇ
ಅವಲೋಕನದ ಶಕ್ತಿ.
ಅವಲೋಕನ ಅಂದರೆ
ನಮ್ಮ ತಪ್ಪುಗಳನ್ನು ತೀರ್ಪು ಕೊಡುವುದು ಅಲ್ಲ.
ಅವುಗಳನ್ನು ಸ್ಪಷ್ಟವಾಗಿ ನೋಡುವುದು.
ಆ ಸ್ಪಷ್ಟತೆ ಬಂದಾಗ
ಬದುಕು ನಿಧಾನವಾಗಿ ಹೊಸ ದಾರಿಗಳನ್ನು ತೆರೆದಿಡುತ್ತದೆ.
— ಅವಲೋಕನ | Sheela Bhat