Reflections (ಆಲೋಚನೆಗಳು)
ಈ ವಿಭಾಗವು ಬದುಕಿನ ಮೌನವಾದ ಸತ್ಯಗಳ ಕುರಿತು ಇರುವ ಆಲೋಚನೆಗಳಿಗಾಗಿ.
ಇವು ಉಪದೇಶಗಳಲ್ಲ.
ಪರಿಹಾರಗಳ ಪಟ್ಟಿ ಕೂಡ ಅಲ್ಲ.
ನಿಲ್ಲಿಸಿ ಯೋಚಿಸಲು,
ತಮ್ಮೊಳಗೆ ಕೇಳಿಸಿಕೊಳ್ಳಲು,
ಮತ್ತು ಬದುಕಿನ ಸೂಕ್ಷ್ಮ ಅನುಭವಗಳನ್ನು ಸ್ಪಷ್ಟವಾಗಿ ಕಾಣಲು ಸಹಾಯ ಮಾಡುವ ಪ್ರತಿಬಿಂಬಗಳು.
ಅವರು ಸುಂದರತೆಯನ್ನು ಹೇಗೆ ನಿರ್ಧರಿಸುತ್ತಾರೆ?
ಸೌಂದರ್ಯದ ರಾಜಕೀಯ ಮತ್ತು ವ್ಯವಸ್ಥೆಯ ಮೌನ ಭ್ರಷ್ಟತೆ ಕೆಲಸದ ಸ್ಥಳದಲ್ಲಿ – ಅವಕಾಶದ ಮೊದಲ ಬಾಗಿಲು ಒಬ್ಬ ಹುಡುಗಿ ಕೆಲಸದ ಸಂದರ್ಶನಕ್ಕೆ ಹೋಗುತ್ತಾಳೆ. ಅವಳ ವಿದ್ಯಾರ್ಹತೆ, ಅನುಭವ, ಕೌಶಲ್ಯ ಎಲ್ಲವೂ ದಾಖಲಾಗಿರಬಹುದು.ಆದರೆ ಸಂದರ್ಶನದ ಕೊಠಡಿಯಲ್ಲಿ ಮೊದಲ ಮಾನದಂಡ ಏನು? ಅವಳು ಸುಂದರವಾಗಿದ್ದಾಳೆಯೇ?ಅಂದವಾಗಿ ಅಲಂಕರಿಸಿಕೊಂಡಿದ್ದಾಳೆಯೇ?ಕ್ಯಾಮರಾ ಕಣ್ಣಲ್ಲಿ ಚೆಂದ ಕಾಣುತ್ತಾಳೆಯೆ? ಕೆಲವೊಮ್ಮೆ ಆ ಮೊದಲ ನೋಟವೇ ಮುಂದಿನ ಪ್ರಶ್ನೆಗಳ ಸ್ವರೂಪವನ್ನು ನಿರ್ಧರಿಸುತ್ತದೆ.ಅವಳ ಸಾಮರ್ಥ್ಯದ ಬಗ್ಗೆ ಕೇಳಬೇಕಾದಲ್ಲಿ, ಅವಳ “ ನೋಟದ ಯೋಗ್ಯತೆ” ಬಗ್ಗೆ ಮಾತು ಶುರುವಾಗುತ್ತದೆ. ಇದು ನೇರ ಭೇದಭಾವ … Read more
ನಿನಗೆ ನಾನು ಸಾಕಾಗದಾ?
ಸಂಬಂಧದಲ್ಲಿ ಸೌಂದರ್ಯ ಮಾನದಂಡವಾಗುವ ಮೌನ ದುರಂತ “ನಿನಗೆ ನಾನು ಸಾಕಾಗದಾ?” ಈ ಪ್ರಶ್ನೆ ಮುಖದ ಬಗ್ಗೆ ಅಲ್ಲ.ಇದು ಸ್ವೀಕಾರದ ಬಗ್ಗೆ. ಪ್ರತಿ ಸಂಬಂಧದ ಒಳಗೆಯೂ ಒಂದು ಮೌನ ಅಳತೆ ಕೆಲಸ ಮಾಡುತ್ತದೆ. ಕೆಲವೊಮ್ಮೆ ಅದು ಗುಣ, ಮೌಲ್ಯ, ನಿಷ್ಠೆ, ವ್ಯಕ್ತಿತ್ವವನ್ನು ಅಳೆಯುತ್ತದೆ. ಆದರೆ ಕೆಲವೊಮ್ಮೆ — ಸೌಂದರ್ಯವೇ ಮಾನದಂಡವಾಗುತ್ತದೆ. ಅಲ್ಲಿ ದುರಂತ ಆರಂಭವಾಗುತ್ತದೆ. ಪ್ರೇಮದಲ್ಲಾಗಲಿ, ವಿವಾಹದಲ್ಲಾಗಲಿ, ದಾಂಪತ್ಯದಲ್ಲಾಗಲಿ — ಯಾರನ್ನು ಆಯ್ಕೆ ಮಾಡಬೇಕು? ಯಾರನ್ನು ನಿರಾಕರಿಸಬೇಕು? ಈ ತೀರ್ಮಾನಗಳಲ್ಲಿ ಸೌಂದರ್ಯ ಮೌನ ಜರಡಿ ಆಗಿಬಿಟ್ಟರೆ, ಆತ್ಮಗೌರವವೇ ಮೊದಲ … Read more
ನಾನು ಯಾಕೆ ಸುಂದರವಾಗಿಲ್ಲ?
ಆತ್ಮಗೌರವವನ್ನು ಮರಳಿ ಕಂಡುಕೊಳ್ಳುವ ಅವಲೋಕನ “ನಾನು ಯಾಕೆ ಸುಂದರವಾಗಿಲ್ಲ?” ಈ ಪ್ರಶ್ನೆ ಕನ್ನಡಿಯ ಮುಂದೆ ಹುಟ್ಟುವುದಿಲ್ಲ.ಇದು ಹೋಲಿಕೆಯ ನಂತರ ಹುಟ್ಟುತ್ತದೆ. ಒಬ್ಬರನ್ನು ನೋಡಿ.ಒಂದು ಫೋಟೋ ನೋಡಿ.ಒಂದು comment ಕೇಳಿ. ಅಲ್ಲೇ ನಮ್ಮ ಮನಸ್ಸು ನಿಧಾನವಾಗಿ ಕೇಳುತ್ತದೆ —“ನಾನು ಯಾಕೆ ಅವರಂತಿಲ್ಲ?” ಆ ಕ್ಷಣದಲ್ಲಿ ಸುಂದರತೆ ಸಮಸ್ಯೆಯಾಗುವುದಿಲ್ಲ.ಹೋಲಿಕೆ ಸಮಸ್ಯೆಯಾಗುತ್ತದೆ. ಸುಂದರತೆ ಹುಟ್ಟಿದ ಕ್ಷಣ ನಾವು ಹುಟ್ಟಿದಾಗನಮಗೆ ನಮ್ಮ ಮುಖದ ಬಗ್ಗೆ ಅಭಿಪ್ರಾಯ ಇರೋದಿಲ್ಲ. “ಸುಂದರ” ಅನ್ನೋ ಪದಹೊರಗಿನಿಂದ ಬರುತ್ತದೆ. ನಮ್ಮ ಆತ್ಮಮೌಲ್ಯ ನಮ್ಮ ಕನ್ನಡಿಯಲ್ಲಿ ರೂಪುಗೊಳ್ಳುವುದಿಲ್ಲ.ಅದು ಸಮಾಜದ ಪ್ರತಿಬಿಂಬದಲ್ಲಿ … Read more
ಕೌತುಕ: ಮಗು ಮತ್ತು ಮಂಗಟ್ಟೆ ಹಕ್ಕಿಯ ಮಧ್ಯೆ ನಾವು ಎಲ್ಲಿದ್ದೇವೆ?
ಪರಿಸರದ ಕುರಿತು ನಾವು ಮಾತನಾಡುವಾಗ ಸಾಮಾನ್ಯವಾಗಿ ಅಂಕಿಅಂಶಗಳು, ನಾಶವಾಗುತ್ತಿರುವ ಅರಣ್ಯಗಳು, ಹವಾಮಾನ ಬದಲಾವಣೆಗಳ ಬಗ್ಗೆ ಚರ್ಚಿಸುತ್ತೇವೆ. ಆದರೆ ಒಂದು ಮಗು ಮತ್ತು ಒಂದು ಹಕ್ಕಿಯ ನಡುವೆ ಮೂಡುವ ಸಂಬಂಧದ ಮೂಲಕ ಪರಿಸರದ ಆತ್ಮವನ್ನು ತೋರಿಸಬಹುದೇ? ಯುವ ನಿರ್ದೇಶಕ ಪ್ರಶಾಂತ್ ಸಾಗರ್ ಅವರ ‘ಕೌತುಕ’ ಅದನ್ನೇ ಮಾಡುತ್ತದೆ. ದಾಂಡೇಲಿಯ ಕಾಡು ಇಲ್ಲಿ ಕೇವಲ ಹಿನ್ನೆಲೆ ಅಲ್ಲ — ಅದು ಜೀವಂತ ಸಾನ್ನಿಧ್ಯ. ಕುಣಬಿ ಜನಾಂಗದ ಬದುಕು, ಅವರ ಪರಂಪರೆಯ ಬೇಟೆ ಸಂಸ್ಕೃತಿ, ಸರಕಾರಿ ಶಾಲೆಯ ಪ್ರಾದೇಶಿಕ ಶಿಕ್ಷಣ ವಾತಾವರಣ … Read more
ಅಂಡರ್ ದ ವೊಲ್ಕ್ಯಾನೊ: ಯುದ್ಧ ಹೊರಗಲ್ಲ… ಒಳಗೇ ಸ್ಫೋಟಗೊಳ್ಳುತ್ತದೆ!
Under the Volcano ಪೊಲಾಂಡ್‌ನ ನಿರ್ದೇಶಕ ಡೆಮಿಯನ್ ಕೊಕುರ್ ಅವರ ಈ ಚಿತ್ರ, ದೃಶ್ಯಕಾವ್ಯದ ಮೂಲಕ ಮನುಷ್ಯನ ಅಂತರಂಗದ ಅಗಾಧತೆಯನ್ನು ಅನಾವರಣಗೊಳಿಸುತ್ತದೆ. ಮೂಲತಃ ಸಿನಿಮಾಟೋಗ್ರಾಫರ್ ಆಗಿರುವ ಕೊಕುರ್, ಸಮುದ್ರವನ್ನು ಕೇವಲ ದೃಶ್ಯವಾಗಿ ಅಲ್ಲ, ಮನಸ್ಸಿನ ರೂಪಕವಾಗಿ ಬಳಸುತ್ತಾರೆ. ಅದಕ್ಕೇ ಇಡೀ ಸಿನಿಮಾ ಒಂದು ಮೌನ ಕಾವ್ಯವಾಗಿ ಹರಿಯುತ್ತದೆ. ಉಕ್ರೇನ್‌ನ ಕೊವಲೆಂಕೊ ಕುಟುಂಬ ಸ್ಪೇನಿನ ಟೆನೆರಿಫೆ ದ್ವೀಪದಲ್ಲಿ ಪ್ರವಾಸದಲ್ಲಿದೆ. ಊರಿಗೆ ಮರಳುವ ಕ್ಷಣ ಹತ್ತಿರವಾಗಿರುವಾಗಲೇ ರಷ್ಯಾ–ಉಕ್ರೇನ್ ಯುದ್ಧ ಘೋಷಣೆಯಾಗುತ್ತದೆ. ವಿಮಾನಗಳು ಸ್ಥಗಿತಗೊಳ್ಳುತ್ತವೆ. ಹಿಂತಿರುಗಲಾರರು. ಇದ್ದಲ್ಲಿಯೂ ಇರಲಾರರು. ಅನಿಶ್ಚಿತತೆ ಅವರ … Read more
ಮೈ ಫಾದರ್ಸ್ ಶ್ಯಾಡೋವ್: ತಂದೆಯ ನೆರಳನ್ನು ತಪ್ಪಿಸಿಕೊಳ್ಳಲು ಸಾಧ್ಯವೇ?
ಯುಕೆಯ ಅಕಿನೊವಾ ಡೇವಿಸ್ (ಜ್ಯೂ) ನಿರ್ದೇಶನದ ಮೈ ಫಾದರ್ಸ್ ಶ್ಯಾಡೋವ್ ,ನೈಜೀರಿಯಾದಲ್ಲಿ ನಡೆಯುವ ವಾಸ್ತವಾಧಾರಿತ ಆಂಗ್ಲ ಸಿನಿಮಾ. ಮಿಲಿಟರಿ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಉದಯಿಸಬೇಕು ಎಂಬ ಕನಸಿನ ಹೊತ್ತಿನಲ್ಲಿ ಬದುಕುತ್ತಿರುವ ಹೋರಾಟಗಾರ ಪೋಲಾ ಇದರ ಕೇಂದ್ರ ಪಾತ್ರ. ತನ್ನ ಹದಿಹರೆಯದಲ್ಲೇ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ, ಇಬ್ಬರು ಮಕ್ಕಳ ತಂದೆಯಾಗಿರುವ ಪೋಲಾ ಹೊರನೋಟಕ್ಕೆ ಯಶಸ್ವಿ ಕುಟುಂಬಸ್ಥ. ಆದರೆ ಒಳಗೆ ಅವನು ಬದುಕುತ್ತಿರುವುದು ತೀವ್ರ ಸಂಘರ್ಷಗಳ ಮಧ್ಯೆ. ೧೧ ವರ್ಷದ ಹಿರಿಯ ಮಗ ತನ್ನದೇ ಲೋಕದಲ್ಲಿ ಮುಳುಗಿರುವವನು. ಅವನ ಮುಖದಲ್ಲಿ … Read more
ನಮ್ಮ ಭಾವನೆಗಳನ್ನು ಗೌರವಿಸಿದರೆ ಬದುಕು ಬದಲಾಗುತ್ತದೆಯೇ?
ಭಾವನೆಗಳು ಮಾನವನ ಜೀವನದ ಅವಿಭಾಜ್ಯ ಅಂಗ. ಸಂತೋಷ, ದುಃಖ, ಕೋಪ, ಭಯ, ನಿರಾಶೆ, ಪ್ರೀತಿ ಎಲ್ಲವೂ ಮಾನವ ಅನುಭವದ ಸಹಜ ಅಂಶಗಳು. ಆದರೂ ಬಹುಮಂದಿ ತಮ್ಮ ಭಾವನೆಗಳೊಂದಿಗೆ ಹೇಗೆ ಇರಬೇಕು ಎಂಬುದನ್ನು ಕಲಿಯದೇ ದೊಡ್ಡವರಾಗುತ್ತಾರೆ. ಕೆಲವರು ಭಾವನೆಗಳನ್ನು ಮರೆಮಾಡುತ್ತಾರೆ, ಕೆಲವರು ಒತ್ತಿಹಿಡಿಯುತ್ತಾರೆ, ಇನ್ನೂ ಕೆಲವರು ಅತಿಯಾಗಿ ಹೊರಹಾಕುತ್ತಾರೆ. ಈ ಎಲ್ಲದ ಮಧ್ಯೆ ಇರುವ ಸಮತೋಲನದ ಮಾರ್ಗವೇ ಭಾವನಾತ್ಮಕ ಅರಿವು (Emotional Awareness). ಭಾವನಾತ್ಮಕ ಅರಿವು ಎಂದರೆ ಭಾವನೆಗಳನ್ನು ನಿಯಂತ್ರಿಸುವುದು ಅಲ್ಲ. ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು. ಇದು ನಮ್ಮೊಳಗೆ ಉದಯಿಸುವ … Read more