ವಯಸ್ಸು ಮತ್ತು ಸ್ವಾಭಿಮಾನ: ‘ಅಯ್ಯೋ ಪಾಪ’ ಎನ್ನುವ ಮಾತಿನ ಹಿಂದಿನ ಸತ್ಯ

ಸೂರ್ಯಾಸ್ತದ ಹೊತ್ತಿನಲ್ಲಿ ತಲೆಯ ಮೇಲೆ ಹೊರೆ ಹೊತ್ತು ಸಾಗುತ್ತಿರುವ ಹಿರಿಯ ವ್ಯಕ್ತಿಯೊಂದಿಗೆ ಗೌರವದಿಂದ ಮಾತನಾಡುತ್ತಾ ಜೊತೆಯಾಗಿ ನಡೆಯುತ್ತಿರುವ ಜನರ ಸಾಂಕೇತಿಕ ಚಿತ್ರ.

ವಯಸ್ಸಾದ ವ್ಯಕ್ತಿಯನ್ನು ‘ಅಯ್ಯೋ ಪಾಪ’ ಎಂದು ಕರೆಯುವುದು ಸಹಾನುಭೂತಿಯೇ ಅಥವಾ ಅವರ ಆತ್ಮಗೌರವಕ್ಕೆ ಧಕ್ಕೆಯೇ? 82 ವರ್ಷದ ತಿಮ್ಮಯ್ಯ ಅವರ ಬದುಕಿನ ಮೂಲಕ ಸ್ವಾಭಿಮಾನ, ಕೆಲಸ ಮತ್ತು ವಯಸ್ಸಿನ ಬಗ್ಗೆ ಒಂದು ಆತ್ಮಾವಲೋಕನ.

ಹೀಗೊಂದು ಬೆಳಗು…

82 ವರ್ಷದ ತಿಮ್ಮಯ್ಯ ಅವರು ತಲೆಯ ಮೇಲೆ ಸುಮಾರು 30 ಕೆಜಿ ಕಡ್ಡಿ ಪೊರಕೆ ಹೊತ್ತು ಮೈಸೂರಿನಲ್ಲಿ ಮಾರಾಟಕ್ಕೆ ತೆರಳುತ್ತಿರುವ ದೃಶ್ಯ.

ಪ್ರತಿದಿನ ಬೆಳಿಗ್ಗೆ ಸುಮಾರು ಆರು ಗಂಟೆಗೆ ನನ್ನ ಮಿತ್ರ ಮಾರುತಿಯೊಂದಿಗೆ ಒಂದು ಸುತ್ತು ಮೈಸೂರಿನ ಸಬರ್ಬ್ ಬಸ್ ನಿಲ್ದಾಣದವರೆಗೆ ಹೋಗಿಬರುವ ಅಭ್ಯಾಸವಿದೆ. ಆ ಬೆಳಗಿನ ದಿನಚರಿಯಲ್ಲಿ ನನಗೆ ಪ್ರತಿದಿನ ಕಾಣಿಸಿಕೊಳ್ಳುವ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ತಿಮ್ಮಯ್ಯ. ಬೆಳಿಗ್ಗೆ ಐದು ಗಂಟೆಗೆ ಎದ್ದು, ಸುಮಾರು ಮೂವತ್ತು ಕೆಜಿ ತೂಕದ ಕಡ್ಡಿ ಪೊರಕೆಯ ಮೆದೆಯನ್ನು ತಲೆಯ ಮೇಲೆ ಹೊತ್ತು ಇಲವಾಲದಿಂದ ಹೊರಡುತ್ತಾರೆ. ನಂತರ ಇಡೀ ಬೆಳಿಗ್ಗೆ ಮೈಸೂರು ನಗರದ ವಿವಿಧ ಕಡೆಗಳಲ್ಲಿ ತಿರುಗುತ್ತಾ ಆ ಮೆದೆಯನ್ನು ಮಾರುತ್ತಾರೆ. … Read more