ಭೀಮನ ಅಮಾವಾಸ್ಯೆ: ಅಳಿಯನ ಕಾಲು ತೊಳೆಯುವುದರಿಂದ ಚಾಮುಂಡಿಯ ಬೆಟ್ಟದವರೆಗೆ
ಭೀಮನ ಅಮಾವಾಸ್ಯೆ ಎಂದರೆ ನಮ್ಮ ಕಡೆ ಕೊಡೆ ಅಮಾವಾಸ್ಯೆ. ಅಳಿಯನ ಮೊದಲ ಮಾವನಮನೆ ಊಟ, ಸೊಳೆ ಉಂಡ್ಲೆಕಾಳು, ಅತ್ತೆಯ ಪ್ರೀತಿ ಮತ್ತು ಮಗಳ ಸಂಸಾರದ ಕುರಿತ ಕಾಳಜಿಯಿಂದ ಆರಂಭವಾಗುವ ಈ ಹಬ್ಬದ ನೆನಪು, ಮೈಸೂರಿನ ಚಾಮುಂಡಿಯ ಬೆಟ್ಟದವರೆಗೆ ನನ್ನನ್ನು ಕರೆದುಕೊಂಡು ಹೋಗುತ್ತದೆ.